Friday, 28 October 2016


ಕನ್ನಡ ಜಾನಪದ ಪರಿಷತ್ ತರೀಕೆರೆ ತಾಲ್ಲೋಕು ಉಧ್ಫಾಟನೆ

ಎಲೆಮರೆಯ ಕಾಯಿಯಂತೆ ಇರುವ ಉತ್ತಮ ಜಾನಪದ ಕಲಾವಿದರನ್ನು, ಅವರ ಕಲೆಯನ್ನು ಹೊರಜಗತ್ತಿಗೆ ಪರಿಚಯಿಸುವ ಹಾಗೂ ಹೊಸ ಕಲಾವಿದರನ್ನು ಸೃಷ್ಟಿಸುವ ಕೆಲಸ ಆಗಬೇಕಿದೆ. ಎ.ಸಿ.ಚಂದ್ರಪ್ಪ ತಾಲ್ಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ

ಪಟ್ಟಣದ ಕೈಲಾಸಂ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ರಾಜ್ಯದ 30 ಜಿಲ್ಲೆಗಳಲ್ಲೂ ಕಾರ್ಯ ನಿರ್ವಹಿಸು ತ್ತಿದೆ. ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಕಲೆಗಳ ಪೈಕಿ 257 ನೃತ್ಯ ಕಲೆ, 54 ಪದ, 5 ಮಹಾಕಾವ್ಯಗಳನ್ನು ಪರಿಷತ್ ಗುರುತಿಸಿದೆ. ಆಡು ಭಾಷೆಯಲ್ಲಿರುವ ಇಂತಹ ಅಮೂಲ್ಯ ಕಲೆಗಳು ಮರೆಯಾಗ ಬಾರದು ಮತ್ತು ಮುಂದಿನ ತಲೆಮಾರಿಗೆ ಸುಲಭವಾಗಿ ದೊರೆಯುವಂತಾಗಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಎಲ್ಲ ಕಲೆಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿಡುವ ಕೆಲಸಕ್ಕೆ ಪರಿಷತ್ ಮುಂದಾಗಿದೆ ಎಂದರು.

ಹಿರಿಯ ಕಲಾವಿದರನ್ನು ಗುರುತಿ ಸುವ, ಹೊಸ ಕಲಾವಿದರನ್ನು ಪರಿಚಯಿ ಸುವ ನಿಟ್ಟಿನಲ್ಲಿ, ಕಲಾವಿದರ ಮನೆಗೆ ತೆರಳಿ ಕಲಾವಿದರ ಗಣತಿ ಮತ್ತು ಅವರ ಆರ್ಥಿಕ ಸ್ಥಿತಿಗತಿಯ ವಿವರನ್ನು ಕಲೆ ಹಾಕಲಾಗುತ್ತಿದೆ. ಆ ಮೂಲಕ ಕಲಾವಿ ದರ ಬದುಕು- ಜೀವನದ ಮೇಲೆ ಬೆಳಕು ಚೆಲ್ಲಲಾಗುವುದು. ಕಲೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟು, ಸಂಕಷ್ಟದ ಲ್ಲಿರುವ ಕಲಾವಿದರಿಗೆ ಸರ್ಕಾರದ ನೆರವು ದೊರಕಿಸಿಕೊಡುವುದು ಸಹ ನಮ್ಮ ಉದ್ದೇಶ ಎಂದು ತಿಳಿಸಿದರು.

ಕನ್ನಡ ಜಾನಪದ ಪರಿಷತ್ ಮುಖ್ಯವಾಗಿ ಸಾರ್ವಜನಿಕ ಶಿಕ್ಷಣ ಇಲಾ ಖೆಯೊಂದಿಗೆ ಒಪ್ಪಿಗೆ ಪಡೆದುಕೊಂಡಿ ದ್ದು, ಶಾಲಾ-ಕಾಲೇಜು ಹಂತದ ಮಕ್ಕಳಲ್ಲಿ ಶಿಕ್ಷಣಕ್ಕಾಗಿ ಜನಪದ ಎಂಬ ವಿಷಯವನ್ನು ಪರಿಚಯಿಸಲಿದೆ. ನಮ್ಮ ನಾಡಿನ ಆಹಾರ, ಉಡುಗೆ, ತೊಡುಗೆ, ಔಷಧ, ಕಲೆ-ಸಂಸ್ಕೃತಿಯನ್ನು ಪರಿಚಯಿ ಸುವ ಮೊದಲ ಪ್ರಯತ್ನ ಇದಾಗಲಿದೆ ಎಂದರು.

‘ಜನಪದ ಸಾಹಿತ್ಯ ಹಾಗೂ ಕಲೆ, ಜನರಿಗೆ ಮುದ ನೀಡುವ ಮತ್ತು ಜನರ ಜೀವಿತಾವಧಿಯಲ್ಲಿ ಸಂತೋಷ ನೀಡುವ ಶಕ್ತಿ ಹೊಂದಿದೆ. ಅದರಿಂದಲೇ ಜನ ಪದ, ಇಂದು ಮತ್ತು ಮುಂದೆಯೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ’ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಎಂದು ಅಭಿಪ್ರಾಯಪಟ್ಟರು.

ಮುಗುಳಿಯ ಜಾನಪದ ಕಲಾವಿದೆ ಲಕ್ಷ್ಮೀ ದೇವಮ್ಮ, ವೀರಗಾಸೆ ಕಲಾವಿದ ಮಾಳೇನಹಳ್ಳಿ ಬಸಣ್ಣ, ಸಾಹಿತಿ ಜಿ.ಬಿ.ಅಪ್ಪಾಜಿ(ಅಪೂರ್ವ), ರಂಗಕರ್ಮಿ ಎ.ಎಸ್.ಕೃಷ್ಣಮೂರ್ತಿ, ಜಯಣ್ಣ ಇದ್ದರು.


janapadaprapancha@gmail.com